   ಮೂಲದೊಡನೆ ಪರಿಶೀಲಿಸಿ
ಕಾಲಾನುಗುಣ ವೇತನ ಪದ್ಧತಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವೇತನಪಾವತಿಯ ವಿಧಾನಗಳಲ್ಲೊಂದು (ಟೈಂ ವೇಜ್ ಸಿಸ್ಟಂ), ಉದ್ಯೋಗಿ ಕೆಲಸಮಾಡಿದ ಕಾಲದ ಆಧಾರದ ಮೇಲೆ ಅವನಿಗೆ ವೇತನ ಪಾವತಿ ಮಾಡುಲಾಗುತ್ತದೆ.

ಕಾಲಾನುಗುಣ ವೇತನ ಪದ್ಧತಿ ಅತ್ಯಂತ ಪ್ರಾಚೀನ ವೇತನ ಪಾವತಿ ಪದ್ಧತಿಗಳಲ್ಲೊಂದು. ವೇತನ ದರವನ್ನು ಗಂಟೆಗೆ, ದಿನಕ್ಕೆ, ವಾರಕ್ಕೆ, ಪಕ್ಷಕ್ಕೆ ಅಥವಾ ತಿಂಗಳಿಗೆ ಇಷ್ಟು ಎಂದು, ಒಂದೊಂದು ಮಟ್ಟದ ಕೆಲಸಕ್ಕೆ ಒಂದೊಂದು ದರವನ್ನು, ನಿಗದಿಮಾಡಲಾಗುತ್ತದೆ. ದಿನದ ಕೊನೆಯಲ್ಲೋ ವಾರ, ಪಕ್ಷ ಅಥವಾ ತಿಂಗಳ ಕೊನೆಯಲ್ಲೋ ಉದ್ಯೋಗಿ ಮತ್ತು ಉದ್ಯೋಗದಾತರ ಪರಸ್ಪರ ಒಪ್ಪಂದದ ಪ್ರಕಾರ ವೇತನವನ್ನು ಪಾವತಿ ಮಾಡುವುದು ರೂಢಿ. ಕೂಲಿಯ ಅವಧಿ ಒಂದು ತಿಂಗಳಿಗಿಂತ ಹೆಚ್ಚಾಗಿರಕೂಡದೆಂದು 1936ರ ಭಾರತೀಯ ಕೂಲಿ ಪಾವತಿ ಕಾಯಿದೆಯಲ್ಲಿ ವಿಧಿಸಲಾಗಿದೆ.

ಕಾಲಾನುಗುಣ ವೇತನ ಪದ್ಧತಿಯಲ್ಲಿ ಅನೇಕ ಅನುಕೂಲಗಳುಂಟು. ಇದರ ಅತ್ಯಂತ ಮುಖ್ಯ ಅನುಕೂಲವೆಂದರೆ ಸರಳತೆ. ಒಂದು ಕೆಲಸಮಾಡಲು ಒಬ್ಬ ಉದ್ಯಮಿ ವಿನಿಯೋಗಿಸಿದ ಕಾಲವನ್ನು ಸುಲಭವಾಗಿ ಅಳತೆಮಾಡಬಹುದು. ಒಂದು ಕೆಲಸಕ್ಕೆ ಎಷ್ಟು ಕಾಲ ಬೇಕಾಯಿತು ಎಂಬುದರ ಆಧಾರದ ಮೇಲೆ ವೇತನ ಪಾವತಿ ಮಾಡುವುದು ನ್ಯಾಯವಾದ್ದೆಂಬುದು ಹಿಂದಿನಿಂದ ಬಂದ ಭಾವನೆ. ಮಾನವನ ದುಡಿಮೆ ಯಾವಾಗಲೂ ಒಂದೇ ದಕ್ಷತೆಯ ಮಟ್ಟದಲ್ಲಿರುವುದಿಲ್ಲ. ಅನಾರೋಗ್ಯ, ಆಕಸ್ಮಿಕ, ಆಯಾಸ ಮುಂತಾದ ಕಾರಣಗಳಿಂದ ಅವನ ಉತ್ಪಾದನ ಸಾಮಥ್ರ್ಯ ಕೆಲವು ಸಾರಿ ಕಡಿಮೆಯಾಗುವುದುಂಟು. ಆಗಲೂ ಅವನ ಕೆಲಸದ ಕಾಲದ ಪ್ರಕಾರ ಕೂಲಿ ಪಾವತಿ ಮಾಡುವುದರಿಂದ ಅವನಿಗೆ ಆರ್ಥಿಕ ಭದ್ರತೆ ದೊರಕಿಸಿಕೊಟ್ಟಂತಾಗುತ್ತದೆ. ಅವನಿಗೆ ಬರುವ ವರಮಾನ ಎಷ್ಟೆಂಬುದು ಗೊತ್ತಿರುವುದರಿಂದ ಕೆಲಸಗಾರ ಅದಕ್ಕೆ ತಕ್ಕಂತೆ ತನ್ನ ಖರ್ಚುಗಳನ್ನು ಹೊಂದಿಸಿಕೊಳ್ಳಬಲ್ಲ. ಕಾಲಾನುಗುಣ ವೇತನದಿಂದ ಕೆಲಸದ ಗುಣಮಟ್ಟ ಹೆಚ್ಚಬಹುದು. ಕೆಲಸದ ಪರಿಮಾಣಕ್ಕೆ ಅನುಗುಣವಾಗಿ ವೇತನ ಪಾವತಿ ಮಾಡುವಾಗ ಅವನು ಗುಣದ ಕಡೆಗೆ ಹೆಚ್ಚಿನ ಲಕ್ಷ್ಯಕೊಡಲಾಗುವುದಿಲ್ಲ. ಹಾಗೆ ಮಾಡಿದರೆ ಕೆಲಸದ ವೇಗ ಕಡಿಮೆಯಾಗುತ್ತದೆ. ಉತ್ಪಾದನೆ ಕಡಿಮೆಯಾಗುವುದರಿಂದ ಅವನಿಗೆ ಕೂಲಿಯೂ ತಗ್ಗುತ್ತದೆ. ಇಲ್ಲಿ ಆ ಭಯ ಇಲ್ಲ. ಬೇಗೆ ಕೆಲಸ ಮುಗಿಯಬೇಕೆಂಬ ಆತುರ ಇರುವುದಿಲ್ಲವಾದ್ದರಿಂದ ಯಂತ್ರವನ್ನು ಅಡ್ಡಾದಿಡ್ಡಿ ಬಳಸಿ ಅದನ್ನು ಕೆಡಿಸುವ ಸಂಭವ ಕಡಿಮೆ. ಪರೋಕ್ಷವಾಗಿ ಇದು ಉದ್ಯೂೀಗದಾತನಿಗೆ ಲಾಭಕರ. ಯಂತ್ರಸಲಕರಣೆಗಳ ಸಂರಕ್ಷಣೆಗೆ ಹೆಚ್ಚಿನ ಉಸ್ತುವಾರಿ ಅವಶ್ಯವಾಗುವುದಿಲ್ಲ. ಇದರ ಲೆಕ್ಕಾಚಾರ ನೇರವೂ ಸರಳವೂ ಆದ್ದರಿಂದ ಕಾರ್ಮಿಕ ಸಂಘಗಳಿಗೆ ಈ ಪದ್ಧತಿಯಲ್ಲೇ ಹೆಚ್ಚಿನ ಒಲವುಂಟು. ಒಂದು ದರದ ವೇತನ ಪಡೆಯುವ ಕಾರ್ಮಿಕರಲ್ಲ ಒಂದು ಎಂಬ ಭಾವನೆ ಬೆಳೆಸುವದರಿಂದ ಕಾರ್ಮಿಕರ ಒಗ್ಗಟ್ಟು ಸಾಧಿಸುತ್ತದೆ. ಸಾಮೂಹಿಕ ಚೌಕಾಸಿಗೂ ಇದು ಅನುಕೂಲಕರ. ತರಬೇತಿ ಹೊಂದಿದ ಕುಶಲ ಕಾರ್ಮಿಕರಿಗೆ ಸದಾ ಕಾಲವೂ ಕೈತುಂಬ ಕೆಲಸ ಇಲ್ಲದಿದ್ದರೂ ಕೆಲಸದ ಪ್ರಾಮುಖ್ಯದ ದೃಪ್ಟಿಯಿಂದ ಅವರನ್ನು ಇಟ್ಟುಕೂಳ್ಳುವುದು ಈ ಪದ್ಧತಿಯಿಂದ ಸಾಧ್ಯವಾಗುತ್ತದೆ. ಇಂಥವರ ಕೆಲಸವನ್ನು ಯಾವಾಗಲೂ ಪರಿಮಾಣ ದೃಷ್ಟಿಯಿಂದ ಅಳೆಯುವುದು ಸಾಧ್ಯವಿಲ್ಲ. ಯಂತ್ರ ಮುಂತಾದ ಸ್ಥಿರ ಆಸ್ತಿಯನ್ನು ಗರಿಷ್ಟ ಮಟ್ಟದಲ್ಲಿ ಬಳಸಿಕೊಳ್ಳಲಿ, ಬಿಡಲಿ, ಅದನ್ನು ದುರಸ್ತಿ ಸ್ಥಿತಿಯಲ್ಲಿಟ್ಟುಕೊಳ್ಳಲು ವೆಚ್ಚ ಮಾಡುವುದು ಅವಶ್ಯವಾಗುವಂತೆ, ದೀರ್ಘಕಾಲಿಕ ದೃಷ್ಟಿಯಿಂದ ಇವರಿಗೆ ವೇತನ ಪಾವತಿ ಮಾಡಲಾಗುತ್ತದೆ. ಮಾಡಿದ ಕೆಲಸಕ್ಕೆ ಅನುಗುಣವಾಗಿ ಇಂಥವರಿಗೆ ವೇತನ ಪಾವತಿ ಮಾಡವುದಾದರೆ ಇವರು ಕೆಲಸ ಕಡಿಮೆಯಿದ್ದಾಗ ಉದ್ಯಮವನ್ನು ಬಿಟ್ಟು ಬೇರೆಡೆಗೆ ಹೋಗಬಹುದು. ಕುಶಲರೂ ದಕ್ಷರೂ ತರಬೇತಿ ಹೊಂದಿದವರೂ ಆದ ಉದ್ಯೋಗಿಗಳನ್ನು ಸಂಸ್ಥೆಯಲ್ಲೇ ಉಳಿಸಿಕೊಳ್ಳಲು ಈ ಪದ್ಧತಿ ಸಹಾಯಕವಾಗುತ್ತದೆ. ಕಾರ್ಯನಿರ್ವಾಹಕರ ಬುದ್ಧಿಪ್ರಧಾನವಾದ ಅನೇಕ ಕೆಲಸಗಳನ್ನು ಅಳೆಯುವುದು ಸಾಧ್ಯವಿಲ್ಲ. ಇವರ ಕೆಲಸಗಳು ಪೂರ್ವನಿಶ್ಚಿತ ಪರಿಮಾಣಗಳಿಗೆ ಬದ್ಧವಾಗಿ ಪುನರಾವರ್ತಿಸುವಂಥವಲ್ಲ. ಶಿಷ್ಟಮಾಪನಕ್ಕೊಳಪಡದ ಅಥವಾ ಎಣಿಸಲಾಗದ ಕೆಲಸಗಳಿಗೆಲ್ಲ ಕಾಲಾನುಗುಣ ವೇತನ ಪಾವತಿಯೇ ಅತ್ಯಂತ ಸಮರ್ಪಕವಾದ್ದು. ಒಂದು ಕೆಲಸದ ಸ್ವರೂಪ ಮತ್ತು ಆವಶ್ಯಕತೆಗಳನ್ನೆಲ್ಲ ಪರಿಗಣಿಸಿ, ಇವಕ್ಕೆ ಸಂಬಂಧಿಸಿದಂತೆ ಕೆಲಸಗಾರನ ನಿರ್ವಹಣೆಯ ಸಾಮಥ್ರ್ಯವೆಷ್ಟಂಬುದನ್ನು ನಿರ್ಣಯಿಸಿ, ಅದಕ್ಕೆ ಬೇಕಾಗುವ ಕಾಲಕ್ಕೆ ಅನುಗುಣವಾಗಿ ವೇತನ ನಿರ್ಧರಿಸುವುದಾದರೆ ಅದು ಸಮರ್ಪಕವಾಗಿರುತ್ತದೆ. ಒಂದೊಂದು ಮಟ್ಟದ ಕೆಲಸಕ್ಕೂ ಒಂದೂಂದು ದರದಲ್ಲಿ ವೇತನ ನಿಗದಿ ಮಾಡುಬಹುದು. ಅದಕ್ಷತೆಯೇ ಆ ಮಟ್ಟದ ಕನಿಷ್ಠ ಸೀಮೆ. ಅದಕ್ಕಿಂತ ಕೆಳಗಿನ ಸಾಮಥ್ರ್ಯವಿರುವ ಕೆಲಸಗಾರ ಆ ಮಟ್ಟದ ದರದಲ್ಲಿ ಕೂಲಿ ಪಡೆಯಲಾರ. ಆ ಮಟ್ಟದ ಗರಿಷ್ಠ ಸೀಮೆಯನ್ನು ಮೀರಿದ ದಕ್ಷತೆ ಉಳ್ಳವನು ವೇತನ ಬಡತಿಗೆ ಅರ್ಹ.

ಕಾಲಾನುಗುಣ ವೇತನದ ಪ್ರತಿಕೂಲಗಳೂ ಹಲವುಂಟು: ಒಂದೂಂದು ಘಟ್ಟದಲ್ಲೂ ಕೆಲಸಮಾಡುವ ಎಲ್ಲ ಕೆಲಸಗಾರರಿಗೂ ಒಂದೇ ದರದಲ್ಲಿ ವೇತನ ನೀಡುವುದರಿಂದ ಅನೇಕ ವೇಳೆ ಅನ್ಯಾಯವಾಗುವುದುಂಟು. ಪ್ರಾಮಾಣಿಕನಿಗೂ ಅಪ್ರಾಮಾಣಿಕನಿಗೂ ಒಂದೇ ವೇತನ ದೊರಕುತ್ತದೆ. ಮಾಡುವ ಕೆಲಸಕ್ಕಿಂತ ಕೆಲಸದ ಸಮಯದಲ್ಲಿ ಆ ಸ್ಥಳದಲ್ಲಿ ಕಾರ್ಮೀಕನ ಹಾಜರಿಯೇ ಮುಖ್ಯ

_ಎಂಬ ಧೋರಣೆ ಬೆಳೆಯುತ್ತದೆ. ಒಮ್ಮೆ ಒಂದು ವೇತನದ ದರ ನಿರ್ಧಾರವಾಯಿತೆಂದರೆ ಆ ದರವೇ ದೀರ್ಘಕಾಲ ಮುಂದುವರಿಯುವ ಪ್ರವೃತ್ತಿ ತೋರಿಸುತ್ತದೆ. ಅದನ್ನು ಬದಲಾಯಿಸಲು ಹೆಚ್ಚು ಪ್ರಯತ್ನ ಅವಶ್ಯವಾಗಬಹುದು. ಈ ಕಾರಣದಿಂದ ಕಾಲಾನುಗುಣ ವೇತನ ಕೆಲಸಗಾರನ ದುಡಿಮೆಯ ದಕ್ಷತೆಯ ಮಟ್ಟವನ್ನು ತಗ್ಗಿಸುವ ಅಪಾಯವುಂಟು. ದಕ್ಷ-ಅದಕ್ಷರಿಬ್ಬರಿಗೂ ಒಳ್ಳೆಯ ಮತ್ತು ಕೆಟ್ಟ ಕಾರ್ಮಿಕರಿಬ್ಬರಿಗೂ ಒಂದೇ ದರದ ವೇತನ ದೊರಕುವುದರಿಂದ ಅದಕ್ಷ ಕಾರ್ಮಿಕನಿಗೆ ಅಥವಾ ಕೆಟ್ಟ ಕಾರ್ಮಿಕನಿಗೆ ಅವನ ಯೋಗ್ಯತೆಗಿಂತ ಹೆಚ್ಚಿನ ಕೂಲಿ ಕೊಟ್ಟಂತಾಗುತ್ತದೆ. ಒಂದು ನಿಗದಿಯಾದ ಕೆಲಸಕ್ಕೆಂದು ಕಾರ್ಮಿಕರನ್ನು ನೇಮಕಮಾಡಿಕೂಂಡಿದ್ದಾಗ ಕಾಲಾನುಗುಣ ವೇತನ ಪಾವತಿಯಿಂದ ನಷ್ಟವಾಗುವ ಸಂಭವವೇ ಹೆಚ್ಚು. ಕೆಲಸವನ್ನು ನಿಧಾನ ಮಾಡಿದಷ್ಟೂ ಉದ್ಯೋಗದಲ್ಲಿ ಮುಂದುವರಿಯುವುದು ಸಾಧ್ಯವಾದ್ದರಿಂದ ಉದ್ಯೋಗಿಗಳು ಕೆಲಸವನ್ನು ಹಿಗ್ಗಿಸುವ ಪ್ರಯತ್ನದಲ್ಲಿ ನಿರತರಾಗಬಹುದು. ಒಂದು ಅವಧಿಯಲ್ಲಿ ಇಷ್ಟು ಕೆಲಸ ಮಾಡಲೇಬೇಕೆಂಬ ಒತ್ತಾಯವಿಲ್ಲದ್ದರಿಂದ ಕಾಲಾನುಗುಣ ವೇತನ ಪದ್ಧತಿಯಲ್ಲಿ ಕಾರ್ಮಿಕರು ಆಲಸಿಗಳಾಗುವ ಅಪಾಯವುಂಟು. ಇದನ್ನು ತಪ್ಪಿಸಲು ಅವರ ಮೇಲೆ ಉಸ್ತುವಾರಿ ಅತ್ಯವಶ್ಯ. ಮಾಡಬೇಕಾದ ಕೆಲಸ, ಅದರ ವಿಧಾನ ಇವುಗಳ ಬಗ್ಗೆ ಪದೇ ಪದೇ ಕೆಲಸಗಾರರಿಗೆ ಸೂಚನೆ ನೀಡಬೇಕಾಗುವುದರಿಂದ ಉದ್ಯೋಗಿಗಳಲ್ಲಿ ಪ್ರಾಮಾಣಿಕರೂ ದಕ್ಷರೂ ಆದವರ ಮೇಲೆ ಮಾನಸಿಕವಾಗಿ ಕೆಟ್ಟ ಪರಿಣಾಮ ಆಗುತ್ತದೆ. ಅವರ ಕರ್ತೃತ್ವಶಕ್ತಿ ನಾಶವಾಗುತ್ತದೆ. ಒಂದು ನಿರ್ದಿಷ್ಟವಾದ ಕಾಲದಲ್ಲಿ ನಿರ್ದಿಷ್ಟವಾದ ಕೆಲಸ ಆಗಿಯೇ ತೀರುವುದೆಂಬ ಭರವಸೆ ಇಲ್ಲವಾದಾಗ, ಕೆಲಸಗಾರರು ಉದ್ದೇಶಪೂರ್ವಕವಾಗಿ ನಿಧಾನಮಾಡುವುದನ್ನು ತಡೆಯಲು ಯಾವ ಉಪಾಯವೂ ಇಲ್ಲದಾಗ, ಉತ್ಪಾದನೆಯ ಘಟ್ಟದ ವೆಚ್ಚ ಏರುತ್ತದೆ. ಕೆಲಸಗಾರರ ವೈಯಕ್ತಿಕ ತರತಮಗಳನ್ನು ಕಡೆಗಣಿಸಿ ಅವರನ್ನೆಲ್ಲ ಏಕರೀತಿಯಲ್ಲಿ ಕಾಣುವುದರಿಂದ ಮಾಲೀಕ-ಕಾರ್ಮಿಕ ವಿರಸಗಳಿಗೂ ಘರ್ಷಣೆಗಳಿಗೂ ಅವಕಾಶ ಏರ್ಪಡುತ್ತದೆ.

ಕಾರ್ಮಿಕರಂತೆ ಉದ್ಯಮಿಗಳೂ ಕಾಲಾನುಗುಣ ವ್ಯವಸ್ಥೆಗೆ ಅನೇಕ ವೇಳೆ ಆದ್ಯತೆ ನೀಡಲು ಒಂದು ಮುಖ್ಯ ಕಾರಣವಿದೆ. ಮಾರುಕಟ್ಟೆಯನ್ನು ವಿಸ್ತರಿಸಬೇಕಾದರೆ ಅವುಗಳ ಗುಣವನ್ನು ವೃದ್ಧಿ ಪಡಿಸುವುದಲ್ಲದೆ ಹೊಸ ಹೊಸ ನಮೂನೆಗಳನ್ನು ತಯಾರು ಮಾಡಬೇಕಾಗುತ್ತದೆ. ಈ ದೃಷ್ಟಿಯಿಂದ ಉತ್ಪಾದನ ಕ್ರಮಗಳನ್ನು ಆಗಾಗ ಬದಲಾಯಿಸ ಬೇಕಾಗುತ್ತದೆ. ಹಾಗೆ ಮಾಡಿದಾಗ ಉತ್ಪಾದನೆಯೂ ಹೆಚ್ಚುವುದು ಸಹಜ. ಉತ್ಪಾದನಾ ಸುಗುಣವೇತನ ಪಡೆಯುವವರು ಆಗ ಅಧಿಕ ಉತ್ಪಾದನೆಗೆ ಅನುಗುಣವಾಗಿ ಹೆಚ್ಚು ವೇತನಬೇಕೆಂದು ಕೇಳುವುದು ಸಹಜ. ಹೆಚ್ಚುವೇತನ ಕೂಡದಿದ್ದಲ್ಲಿ ಇಂಥ ತಕರಾರಿಗೆ ಅವಕಾಶವಿರುವುದಿಲ್ಲ. ಉತ್ಪಾದನೆಯ ಏರಿಳಿತಗಳಿಗೆ ಅನುಗುಣವಾಗಿ ವೇತನ ಏರಿಳಿಸಬೇಕೆಂಬ ಒಪ್ಪಂದ ಇರುವುದಿಲ್ಲ. ಅಲ್ಲದೆ ಈ ಮಧ್ಯೆ ಉದ್ಯಮಿಗಳು ಕೆಲಸದ ವಿಶ್ಲೇಷಣೆ ಮತ್ತು ಕೆಲಸದ ಮೌಲ್ಯ ನಿರ್ಣಯ ಕ್ರಮಗಳ ಸಹಾಯದಿಂದ ಒಂದು ಸ್ಧಿರವಾದ ಕೆಲಸದ ರಚನಾಕ್ರಮವನ್ನು ವೃದ್ಧಿಪಡಿಸಿ ಪ್ರತಿಕಾರ್ಮಿಕನ ಕೆಲಸದ ಹೂರೆ ಇಷ್ಟು ಎಂಬುದರ ವಿಷಯವಾಗಿ ಕಾರ್ಮಿಕ ಸಂಘಗಳೊಡನೆ ಒಪ್ಪಂದಕ್ಕೆ ಬಂದು ಆ ಒಪ್ಪಿಗೆಯ ಮೇರೆಗೆ ಕಾರ್ಮಿಕರು ತಮ್ಮ ಪಾಲಿಗೆ ಬಂದ ಕೆಲಸದ ಹೊರೆಯ ಪ್ರಕಾರ ಕೆಲಸ ಮಾಡಿಕೊಂಡು ಹೋಗುವ ಹಾಗೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಈ ಕಾರಣದಿಂದ ಕೆಲಸದ ವಿಷಯದಲ್ಲಿ ಬಲವಾದ ಶಿಸ್ತನ್ನು ಕಾರ್ಮಿಕರ ಮೇಲೆ ಹೇರಿದರೂ ಕೈಗಾರಿಕಾ ಸಂಬಂಧ ಹದಗೆಡುವುದಕ್ಕೆ ಅವಕಾಶವಿರುವುದಿಲ್ಲವೆಂಬುದಾಗಿ ಭಾವಿಸಲಾಗಿದೆ.

ಪಾಶ್ಚಾತ್ಯ ದೇಶಗಳಲ್ಲಿ, ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಧಾನದಲ್ಲಿ ಮೇಲಿನ ಕಾರಣಗಳಿಂದ ಈಚೀಚೆಗೆ ಕಾಲಾನುಗುಣ ವೇತನ ಹೆಚ್ಚು ಹೆಚ್ಚಾಗಿ ಬಳಕೆಗೆ ಬರುತ್ತಿದೆ. ಕಾಲಾನುಗುಣವೇತನ ಬಳಕೆಯಲ್ಲಿರುವ ಕಾರ್ಖಾನೆಗಳಲ್ಲಿ ವೇತನ ಒಂದು ಗಂಟೆಗೆ ಇಷ್ಟು ಎಂದು ನಿಗದಿಯಾಗಿರುತ್ತದೆ. ಸರ್ಕಾರದ ಕನಿಷ್ಠ ಮೇರೆಗೆ ನಿಗದಿ ಮಾಡಿದೆ. ಸಂಯುಕ್ತಸಂಸ್ಧಾನದಲ್ಲಿ ಸುಮಾರು 70% ಕಾರ್ಮಿಕರು ಕಾಲಾನುಗಣವೇತನದವರು. ಇತರ ದೇಶಗಳಲ್ಲಿ ಇವರ ಸಂಖ್ಯೆ ಕಡಿಮೆ; ಇಂಗ್ಲೆಂಡಿನಲ್ಲಿ 60%, ಯೂರೂೀಪಿನಲ್ಲಿ 40-50% ಮತ್ತು ರಷ್ಯದಲ್ಲಿ ಕೇವಲ 25%.

ಕಾರ್ಮಿಕರ ವೇತನದ ವೆiÁತ್ತ ಕಾರ್ಖಾನೆಯ ಒಟ್ಟು ವೆಚ್ಚದ ಪ್ರಧಾನ ಭಾಗವಾಗಿರದ ಕೈಗಾರಿಕೆಗಳಲ್ಲಿ ಕಾಲಾನುಗಣ ವೇತನ ಹೆಚ್ಚಾಗಿ ಜಾರಿಯಲ್ಲಿದೆ. ಎಂದರೆ ಇಲ್ಲಿ ತಾಂತ್ರಿಕ ಮಟ್ಟ ತೀರ ಹೆಚ್ಚಿನದು. ಕಾರ್ಖಾನೆಗಳ ಗಾತ್ರವೂ ದೊಡ್ಡದಾಗಿರುತ್ತದೆ. ಸಂಯುಕ್ತಸಂಸ್ಧಾನದಲ್ಲಿ ಈ ಅಂಶಗಳು ಕಂಡುಬರುವುದರಿಂದ ಅಲ್ಲಿ ಕಾಲಾನು ಗುಣವೇತನ ಪಡೆಯುವ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿರುವುದು ಸ್ವಾಭಾವಿಕ. ಈ ವ್ಯವಸ್ಥೆ ಜಾರಿಗೆ ಬರಲು ತಾಂತ್ರಿಕ ಮಟ್ಟ ಮುಖ್ಯವಾದರೂ ಸಂಪ್ರದಾಯ, ವ್ಯಕ್ತಿಗತ ಉತ್ಪನ್ನವನ್ನಳೆಯುವ ಅನುಕೂಲತೆ ಮತ್ತಿತರ ಅಂಶಗಳು ಬಹಳಮಟ್ಟಿಗೆ ಇದಕ್ಕೆ ಕಾರಣವಾಗುತ್ತವೆ.

ಈ ಅಂಶಗಳ ಪಾತ್ರವನ್ನು ಭಾರತದ ಉದ್ಯಮಗಳಲ್ಲಿಯ ವೇತನ ಪಾವತಿಯ ಅನುಭವದಿಂದ ವಿವರಿಸಬಹುದು. ಭಾರತದಲ್ಲಿ ಮೊದಲು ಸ್ಧಾಪಿತವಾದ ಕಾರ್ಖಾನೆಗಳು ಜವಳಿ ಗಿರಣಿಗಳು. ಇವುಗಳಲ್ಲಿ ನೂಲುವ ಮತ್ತು ನೇಯುವ ಕಾರ್ಯದ ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿರುವ ಕೆಲಸಗಳಿದ್ದುದರಿಂದ ಮೊದಲು ಉತ್ಫನ್ನಾನುಗುಣ ವೇತನವನ್ನು ಜಾರಿಗೆ ತರಲಾಯಿತು. ಇದಕ್ಕೆ ಮತ್ತೊಂದು ಕಾರಣವೆಂದರೆ ಮೊದಮೊದಲು ಗಿರಣಿ ಮಾಲೀಕರು ಉಸ್ತುವಾರಿ ಖರ್ಚನ್ನು ಉಳಿತಾಯ ಮಾಡುವುದಕ್ಕಾಗಿ ಉತ್ಪನ್ನಕಾರ್ಯವನ್ನು ಗುತ್ತಿಗೆಯ ಮೇರೆಗೆ ಮೇಸ್ತ್ರಿಗಳು ಕೊಟ್ಟು ಉತ್ಪನ್ನದ ಪ್ರತಿ ಅಂಶಕ್ಕೆ ಕಮಿಷನ್ ಗೊತ್ತುಮಾಡಿದರು. ಮೇಸ್ತ್ರಿಗಳು ಕಾರ್ಮಿಕರಿಗೂ ಇದೇ ರೀತಿ ವೇತನವನ್ನು ಗೊತ್ತುಪಡಿಸಿದರು. ಮೇಸ್ತ್ರಿಗಳ ಈ ವ್ಯವಸ್ಥೆ ಈಗ ಜಾರಿಯಲ್ಲಿಲ್ಲದಿದ್ದರೂ ಬಟ್ಟೆ ಕಾರ್ಖಾನೆಗಳಲ್ಲಿ ಇಂದಿಗೂ ಉತ್ಪನ್ನಾನುಗುಣ ವೇತನವೇ ಬಹಳಮಟ್ಟಿಗೆ ಜಾರಿಯಲ್ಲಿದೆ. ಆದರೆ ಕಾಲಕ್ರಮೇಣ ಹೊಸ ಹೊಸ ಕೈಗಾರಿಕೆಗಳಾದ ಎಂಜಿನಿಯರಿಂಗ್, ರೈಲು, ವಿಮಾನ, ಹಡಗು, ಮೋಟಾರು, ಸಿಮೆಂಟ್, ಗಾಜು, ಕಾಗದ, ಸಕ್ಕರೆ, ರಸಾಯನವಸ್ತು ಮುಂತಾದ ಕೈಗಾರಿಕೆಗಳು ಸ್ಥಾಪಿತವಾದುವು. ಈ ಕಾರ್ಖಾನೆಗಳಲ್ಲಿ ವ್ಯಕ್ತಿಗತ ಉತ್ಪನ್ನವನ್ನಳೆಯಲು ಅನುಕೂಲವಿರುವ ಕೆಲಸಗಳು ತೀರ ಕಡಿಮೆಯಾದ್ದರಿಂದ ಇಲ್ಲಿ ಉತ್ಪನ್ನವನ್ನು ಗುಣ ವೇತನಕ್ಕಿಂತ ಹೆಚ್ಚಾಗಿ ಕಾಲಾನುಗುಣ ವೇತನವನ್ನು ಜಾರಿಗೆ ತರಲಾಯಿತು. ಭಾರತದಲ್ಲಿ ಕಾಲಾನುಗುಣ ಇಲ್ಲವೆ ಉತ್ಪನ್ನಾನುಗುಣ ವೇತನದ ಪ್ರಾಮುಖ್ಯ ಆಯಾ ಕೈಗಾರಿಕೆಯ ಸ್ವರೂಪಕ್ಕೆ ಅನುಗುಣವಾಗಿರುತ್ತದೆ.

ಭಾರತ ಸರ್ಕಾರದ ಕಾರ್ಮಿಕ ಬ್ಯೂರೋ ನಡೆಸಿದ ಒಂದು ಅಧ್ಯಯನದ ಪ್ರಕಾರ ಭಾರತದ ಕೈಗಾರಿಕೆಗಳಲ್ಲಿ ಕಾಲಾನುಗುಣ ಮತ್ತು ಉತ್ಪನ್ನಾನುಗುಣ ವೇತನಗಳ ಪರಸ್ಪರ ಪ್ರಾಮುಖ್ಯ ಈ ರೀತಿ ಇದೆ (1958-59):

 

  

ಕಾಲಾನುಗುಣ

ಉತ್ಪನ್ನಾನುಗುಣ

ಕೈಗಾರಿಕೆಗಳು

ವೇತನz   

ಕಾರ್ಮಿಕರು

ವೇತನz 

ಕಾರ್ಮಿಕರು

  

ಸೇ

ಸೇ

1. Pರ್ಖಾನೆ ಕೈಗಾರಿಕೆಗಳು 

68.2

31.8

ನೇಯ್ಗೆ ಕೈಗಾರಿಕೆ

55.9

44.1

ಎಂಜಿಯರಿಂಗ್ ಕೈಗಾರಿಕೆ

98.9

1.1

ಇvg

68.8

31.2

2 ಪ್ಲಾಂಟೇಷನ್ ಕೈಗಾರಿಕೆ

24.6

75.4

3 Uಣ ಕೈಗಾರಿಕೆ

42.2

57.8

  

ವ್ಯಕ್ತಿಗತ ಉತ್ಪನ್ನವನ್ನಳೆಯಲು ದುಸ್ಸಾಧ್ಯವಾದ ಎಂಜಿನಿಯರಿಂಗ್ ಮತ್ತಿತರ ಹೊಸ ಕೈಗಾರಿಕೆಗಳಲ್ಲಿ ಕಾಲಾನುಗುಣ ವೇತನ ಹೆಚ್ಚು ಮುಖ್ಯವಾಗಿರುವುದು ಮೇಲಣ ಅಂಕಿಗಳಿಂದ ವ್ಯಕ್ತವಾಗುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿರುವಂತೆ ಭಾರತದಲ್ಲೂ ಕಾಲಾನುಗುಣ ವೇತನ ಗಂಟೆಗಳ ಆಧಾರದ ಮೇಲೆ ಇಲ್ಲವೆ ದಿನದ ಅಥವಾ ತಿಂಗಳ ಮೇರೆಗೆ ಇದೆ. ಗಂಟೆಯ ಅವಧಿಯ ಮೇರೆಗೆ ವೇತನ ನಿಗದಿಯಾಗಿರುವುದು ವಿರಳ. ಉದಾಹರಣೆಗೆ ಬೆಂಳೂರಿನಲ್ಲಿರುವ ಮೋಟಾರ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಕಾರ್ಮಿಕರ ವೇತನ ಗಂಟೆಗಳ ಆಧಾರದ ಮೇಲೆ ನಿಗದಿಯಾಗಿದ್ದು ತಿಂಗಳಿಗೊಂದಾವರ್ತಿ ಬಟವಾಡೆಯಾಗುತ್ತದೆ.

ಕಾಲಾನುಗಣ ವೇತನವನ್ನು ಕಾರ್ಮಿಕ ಸಂಘಗಳೂ ಹಲವು ವೇಳೆ ಉದ್ಯಮಿಗಳೂ ಪುರಸ್ಕರಿಸಿದ್ದರೂ ಹಲವು ತಜ್ಞರಿಂದ ಈ ವ್ಯವಸ್ಥೆಗೆ ಒಳ್ಳೆಯ ಪುರಸ್ಕಾರ ದೊರೆತಿಲ್ಲ. ಉತ್ಪನ್ನವನ್ನು ಹೆಚ್ಚಿಸುವುದೇ ಭಾರತದ ಯೋಜನೆಗಳ ಸದ್ಯದ ಗುರಿಯಾಗಿರುವಾಗ ಉತ್ಪನ್ನವನ್ನು ಹೆಚ್ಚಿಸುವಂಥ ಪ್ರೇರಣೆ ಇಲ್ಲದಿರುವ ಈ ವ್ಯವಸ್ಥೆ ಭಾರತದ ಕೈಗಾರಿಕೆಗಳಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂದು ಅವರ ಅಭಿಪ್ರಾಯ. ಈ ವಾದವನ್ನು ಭಾರತ ಸರ್ಕಾರ ಒಪ್ಪಿಕೊಂಡು ಯೋಜನೆಯಲ್ಲಿ ಅದಿಕೋತ್ಪಾದನೆಗೆ ಪ್ರಾಶಸ್ತ್ಯ ಕೊಡುವ ಉದ್ದೇಶದಿಂದ ತನ್ನ ವೇತನ ನೀತಿಯಲ್ಲಿ ಕಾಲಾನು ಗುಣವೇತನಕ್ಕಿಂತ ಉತ್ಪನ್ನಾನುಗುಣವೇತನಕ್ಕೆ ಪ್ರಾಶಸ್ತ್ಯ ಕೊಟ್ಟಿರುವುದಲ್ಲದೆ ಪ್ರತಿ ಉದ್ಯಮಕ್ಕೂ ನೇಮಕ ಮಾಡಲಾಗುವ ವೇತನ ಬೋರ್ಡುಗಳಿಗೆ ಒಂದು ಸಮರ್ಪಕವಾದ ಉತ್ಪನ್ನಾನುಗುಣ ವೇತನ ವ್ಯವಸ್ಧೆಯನ್ನು ಸೂಚಿಸುವಂತೆ ಕೇಳಿಕೂಳ್ಳುತ್ತಿದೆ. ಈ ಕಾರಣದಿಂದ ಈಗೀಗ ಅನೇಕ ಉದ್ಯಮಗಳಲ್ಲಿ ಉತ್ಪನ್ನಾನುಗುಣ ವೇತನ ವ್ಯವಸ್ಥೆ ಹೆಚ್ಚು ಪ್ರಾಮುಖ್ಯ ಗಳಿಸುತ್ತಿದೆ.

ಆದರೆ ಉತ್ಪನ್ನಾನುಗುಣ ವೇತನ ಪದ್ಧತಿಯಲ್ಲಿ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆ ಬರಬಹುದಾದುದರಿಂದ ಕಾರ್ಮಿಕ ಸಂಘಗಳ ವಿರೂೀಧವನ್ನೆದುರಿಸಬೇಕಾಗಿ ಕಾಲಕ್ರಮದಲ್ಲಾದರೂ ಕಾಲಾನುಗುಣ ವೇತನ ಪದ್ಧತಿಯನ್ನನುರಿಸಬೇಕಾಗಬಹುದು. ಅಲ್ಲದೆ ಕಾಲಾನುಗುಣ ವೇತನ ಕ್ರಮದಲ್ಲಿ ಕೂಡ ಬೋನಸ್ ಮುಂತಾದ ಪ್ರೋತ್ಸಾಹ ನೀಡುವ ಕ್ರಮಗಳನ್ನನುಸರಿಸಿ ಅಧಿಕ ಉತ್ಪಾದನೆಯನ್ನು ಪಡೆಯುವ ಅವಕಾಶವಿದೆ. ವಾಸ್ತವವಾಗಿ ಎಷ್ಟೋ ಉದ್ಯಮಗಳಲ್ಲಿ ಕಾಲಾನುಗುಣ ವೇತನದ ಜೊತೆಗೆ ಬೋನಸ್ ಕಾಡುವ ಪದ್ಧತಿಯನ್ನನುಸರಿಸಲಾಗುತ್ತಿದೆ.        

 (ಎ.ಬಿ.ಎ.)